Tuesday, March 8, 2016

ನಿನ್ನ ಕಣ್ಣೆವೆಯೊಳಗಿನಿತು ...

ಹೃದಯದೊಳಗಲ್ಲದಿದ್ದರೂ ಸರಿ
ನಿನ್ನ ಕಣ್ಣೆವೆಯೊಳಗಿನಿತು ನೆಲೆ ನೀಡು
ನಾ ಬದುಕಬೇಕಿದೆ ...

ತೇಲುತ್ತಾ ಮುಳುಗುತ್ತಾ ಸಾಗುತ್ತಿದೆ ಬದುಕು ...

ದಡವಿರದ ನದಿ
ತಳವಿರದ ದೋಣಿ
ಎರಡರ ನಡುವೆ ಬದುಕು
ತೇಲುತ್ತಾ ಮುಳುಗುತ್ತಾ
ಸಾಗುತಿದೆ ...

Monday, March 7, 2016

ಕಳೆದುಕೊಂಡ ನವಿಲುಗರಿಯದೇ ಕನಸು ...

ಗೊತ್ತು ನನಗೆ
ನಾನು ನಿನಗೆ ಇಷ್ಟವಿಲ್ಲವೆಂದು
ಆದರೇನು ಮಾಡಲಿ?
ಮನಸ್ಸು ಕೇಳುತ್ತಿಲ್ಲ
ಚಂಡಿ ಹಿಡಿದ ಮಗುವಿನಂತಹ ಮನಸು
ಎಷ್ಟು ಹೇಳಿದರೂ ಅದಕೆ 
ಕಳೆದುಕೊಂಡ ನವಿಲುಗರಿಯದೇ ಕನಸು ...

Sunday, March 6, 2016

ಒಡೆದ ಕೊಳಲು ಉಲಿಯುವುದಿಲ್ಲ ...

ಒಡೆದ ಕೊಳಲು
ಉಲಿಯುವುದಿಲ್ಲ ನಿಜ
ಒಡೆದ ಹೃದಯ
ಹಾಡುವುದಿಲ್ಲವೆಂದು
ಯಾರು ಹೇಳಿದರು?
ಚರಮಗೀತೆಯದರ ಹಕ್ಕು

ನನ್ನೆದೆಯ ದೀಪವಾಗದಿದ್ದರೂ ...

ನನ್ನೆದೆಯ ದೀಪವಾಗದಿದ್ದರೂ
ಪರವಾಗಿರಲಿಲ್ಲ
ಹಬ್ಬಬಾರದಿತ್ತು ನೀನು
ಕಾಳ್ಗಿಚ್ಚಾಗಿ
ನನ್ನ ಹೃದಯವನು
ಹೀಗೆ ದಹಿಸಬಾರದಿತ್ತು ...

ನಿನಗೇಕೆ ಹೂವಿನ ಕವಿತೆ ಓದುವ ಆಸೆ ...

ಹೇ ಚೆಲುವೆ
ನಿನಗೇಕೆ ಹೂವಿನ ಕವಿತೆ
ಓದುವ ಆಸೆ
ನೀನಾಡುವ ಮಾತೆ ಮುತ್ತಿನಂತಹ
ಕವಿತೆಯಾಗಿರುವಾಗ

ನಿನಗೇಕೆ ಹೂವಿನ
ಪರಿಮಳ ಹೀರುವ ದಾಹ
ನಿನ್ನ ಮನಸಿನ ರೂಪವೇ
ಪರಿಮಳವಾಗಿರುವಾಗ

ನಿನಗೇಕೆ ಹೂವಿನ
ಅಂದ ನೋಡುವ ಆಸೆ
ನಿನ್ನ ಮೊಗದ ಚೆಲುವೇ
ಕಮಲ ಪುಷ್ಪವಾಗಿರುವಾಗ

Wednesday, March 2, 2016

ನಾ ಬೇಡಿದ್ದು ಬೊಗಸೆ ಪ್ರೀತಿ ...

ಪ್ರೀತಿಯ ಹೊರತು ನಾ ಬೇರೇನು
ಕೇಳಿದೆ?
ನೀಡಿದ್ದರೆ ಬೊಗಸೆಯಷ್ಟು ಪ್ರೀತಿ
ನೀನಾಗುತ್ತಿದ್ದೆಯಾ
ನಿರ್ಗತಿಕಳು?

Monday, February 29, 2016

ಹೆಂಗಸು ಬಿಚ್ಚುವುದಿಲ್ಲ ಮನಸ ...

ಹೆಂಗಸು
ಬಿಚ್ಚುವುದಿಲ್ಲ
ಗಂಡಸಿನ ಹಾಗೆ
ಮನಸ 
ಕಟ್ಟಿಕೊಂಡ ಕನಸ ...

Sunday, February 28, 2016

ನಿನ್ನ ಕಣ್ಣುಗಳಳನ್ನ್ಹೊರತುಪಡಿಸಿ ...

ನಿನ್ನ ಕಣ್ಣುಗಳಳನ್ನ್ಹೊರತುಪಡಿಸಿ
ಈ ಪ್ರಪಂಚದಲ್ಲಿ ಬೇರೇನಿದೆ
ಅವು ತೆರೆದರೆ ಹಗಲು
ಅವು ಮುಚ್ಚಿದರೆ ಇರುಳು

तेरी आँखों के सिवा दुनियाँ में रखा क्या है
ये उठे सुबह चले, ये झूके शाम ढले

ತೇರಿ ಆಂಖೋಂ ಕೆ ಸಿವಾ ದುನಿಯಾ ಮೆ ರಕ್ಕಾ ಕ್ಯಾ ಹೈ
ಯೆ ಉಠೆ ಸುಬಹ ಚಲೆ, ಯೆ ಝುಕೆ ಶಾಮ್ ಡಲೆ

ಚಿರಾಗ್ ಹಿಂದಿ ಚಲನಚಿತ್ರದ (1969)  ಮಹಮ್ಮದ್ ರಫಿ ಹಾಡಿರುವ “ತೇರಿ ಆಂಖೋಂ ಕೆ ಸಿವಾ ದುನಿಯಾ ಮೆ ರಕ್ಕಾ ಕ್ಯಾ ಹೈ” ಹಾಡಿನ ಸಾಲುಗಳ ಭಾವಾನುವಾದ.

Saturday, February 27, 2016

ನಿನ್ನ ಕಂಗಳಂತೆ ಹೊಳೆಯಲು ...

ನಕ್ಷತ್ರಗಳು
ನಿನ್ನ ಕಂಗಳಂತೆ
ಹೊಳೆಯಲು
ಹೆಣಗಾಡುತಿಹವು ... 

ಹೂಗಳು
ನಿನ್ನ ನಗುವಿನಂತೆ
ಅರಳಲು
ಹೆಣಗಾಡುತಿಹವು ... 

Saturday, February 20, 2016

ಮೋಹಕ ನಗು



ನೀ ಬೀರಿದ ಸುಂದರ ನಗು
ಮುಗ್ಧ ಮನಸಿನ ಮೋಹಕ ನಗು
ಸ್ಪೂರ್ತಿಯ ಚಿಲುಮೆಯಲಿ
ಚಿಮ್ಮಿದ ಗುಲಾಬಿ ಹೂ …