Showing posts with label ಸುಬ್ರಾಯ ಚೊಕ್ಕಾಡಿ. Show all posts
Showing posts with label ಸುಬ್ರಾಯ ಚೊಕ್ಕಾಡಿ. Show all posts

Friday, November 1, 2013

ಸಂಜೆಯ ರಾಗಕೆ ...

ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ
ಈಗ ರಂಗೇರಿದೆ

ಮರಗಿಡ ನೆಲದ ಮೇಲೆ ನೆರಳನು ಹಾಸಿದೆ
ಹೂಗಳ ದಳಗಳ ನಡುವೆ ನಿನ್ನದೇ ಬೆರಳಿದೆ

ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ

ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ
ದಳದಲಿ ಎಂತಹ ಕನಸಿನ ಲೋಕವು ತೆರೆದಿದೆ

ಸುಬ್ರಾಯ ಚೊಕ್ಕಾಡಿ
ಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, October 20, 2013

ಮುನಿಸು ತರವೇ ಮುಗುದೆ

ಮುನಿಸು ತರವೇ ಮುಗುದೆ 
ಹಿತವಾಗಿ ನಗಲು ಬಾರದೆ

ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಝುಮ್ಮೆನ್ನಲು
ನವಭಾವ ತುಂಬಿ ತುಂಬಿ ಮನ ಹಾಡಲು 
ತೆರೆದಂತಿದೆ ಭಾಗ್ಯದ ಬಾಗಿಲು

ಎಷ್ಟೊಂದು ಕಾಲದಿಂದ ಹಂಬಲಿಸಿದೆ 
ನೀ ಬಂದು ಸೇರಿ ನನ್ನ ಮುದಗೊಳಿಸಿದೆ
ಜೀವನದ ನೂರು ಕನಸು ನನಸಾಗಿದೆ 
ಮುನಿಸೇತಕೆ ಬಗೆ ಮೂಡಿದೆ

ಹೊಸಬಾಳ ಬಾಗಿಲಲ್ಲಿ ನಾವೀದಿನ 
ನಿಂತಿರುವ ವೇಳೆಯಲ್ಲಿ ಏಕೀ ಮನ
ವಾಗರ್ಥವಾದಂತೆ ನಮ್ಮ ಮೈಮನ 
ಜತೆಸೇರಲು ಜೀವನ ಪಾವನ

ಸುಬ್ರಾಯ ಚೊಕ್ಕಾಡಿ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ