ಮುಳುಗಿಹೋಗುವೆನೆಂಬ
ಭಯದಿ
ದೋಣಿ
ಎಂದೂ ಪಯಣಿಸದು
ದಡಸೇರುವೆನೆಂಬ ಆತ್ಮವಿಶ್ವಾಸದಿ
ಸಾಗುವುದು
ಮುಂದೆ ಮುಂದೆ
ಮುಳುಗುವವನಿಗೆ
ತೃಣಮಾತ್ರ
ಹುಲುಕಡ್ಡಿಯೂ
ಆಸರೆಯಂತೆ
ಬದುಕಲು
ಬಲವೊಂದಿದ್ದರೆ ಸಾಕೆ
ಬಿದ್ದಾಗ
ಮೇಲೇಳುವ ಛಲಬೇಕು
ಪಡುವಣದಿ
ಮುಳುಗುವ ಸೂರ್ಯನು
ಮೂಡಣದಿ
ಮತ್ತೆ ಏಳದಿಹನೇ
ಸಕಲ
ಜೀವರಾಶಿಗೆ ಚೈತನ್ಯ ನೀಡುತ
ಜಗದ
ಆದಿ ಅಂತ್ಯಕೆ ನಾಂದಿಯಾಗುತಿಹನು
ಏಳು
ಬೀಳುಗಳ ಸಂತೆಯಲ್ಲಿ
ಅಳಿವು
ಉಳಿವುಗಳ ಸ್ಪರ್ಧೆಯಲ್ಲಿ
ಭೂತಭವಿಷ್ಯಗಳ
ಚಿಂತೆಯಲ್ಲಿ
ಬೀಳುವುದೇ
ಕರ್ಮವಾದರೂ
ಏಳುವುದು
ನಮ್ಮ ಧರ್ಮವಾಗಬೇಕು
ಬದುಕೆಂಬುದು
ಬರಡು ಬಯಲಲ್ಲ
ಇಲ್ಲಿ
ಏಳಲು ಎತ್ತರೆತ್ತರದ ಏರಿಗಳಿವೆ
ಬೀಳಲೆಂದೇ
ಆಳದ ಪ್ರಪಾತಗಳಿವೆ
ತುಳಿದು
ಮೇಲೇಳುವ ತವಕದಲಿ
ಅನ್ಯರಳಿದು
ತಾನುಳಿದರೆ ಸಾಕೆ ???
ತುಳಿಯುವವರನ್ನು
ಅಳಿಯದೆ
ಮುಳುಗಿಸುವವರನು
ಜರಿಯದೆ
ತೇಲಿಸಲು
ಮೇಲೊಬ್ಬನಿರುವಾಗ
ಬಿದ್ದವರನ್ನು
ಕೈನೀಡಿ ಮೇಲೆತ್ತುವ
ಸಹಕಾರತತ್ತ್ವ ನಮ್ಮದಾಗಬೇಕು
ನಮ್ಮಂತೆ
ಪರರೆಂಬ ಸಮರಸದ
ದಿವ್ಯಮಂತ್ರ
ನಮ್ಮದಾಗಬೇಕು
ಶ್ರೀಮತಿ ಪದ್ಮಾವತಿ ಸಿ.
ಶ್ರೀಮತಿ ಪದ್ಮಾವತಿ ಸಿ.
ಸಹಾಯಕ ಪ್ರೌಢಶಾಲಾ ಶಿಕ್ಷಕಿ
ಸರ್ಕಾರಿ ಪ್ರೌಢ ಶಾಲೆ, ಶಾಪೂರು
ಕೋಲಾರ ತಾಲ್ಲೂಕು
No comments:
Post a Comment