Happy Valentines day...
ಏನಿದು ಪ್ರೀತಿ ಅಂದ್ರೆ....?
ಯಾವಾಗ ನಿಮ್ಮ ತಾಯಿ ಮುತ್ತನ್ನಿತ್ತು "ನನ್ನ ಮಗ ಲಕ್ಷಕ್ಕೆ ಒಬ್ಬ" ಅಂತಾಳಲ್ವಾ...? ಅದು ಪ್ರೀತಿ ...!!
ಯಾವಾಗ ಕೆಲಸ ಮುಗಿಸಿ ಮನೆಗೆ ಬಂದಾಗ ಅಪ್ಪ "ಏನು ಮಗನೇ ತುಂಬಾ ಸುಸ್ತಾದಂತೆ ಕಾಣ್ತಾ ಇದೀಯಾ ?" ಅಂತಾರಲ್ವಾ ಅದು ಪ್ರೀತಿ ...!!
ಯಾವಾಗ ತಮ್ಮ "ಯಾಕೆ ಟೆನ್ಷನ್ ಮಾಡ್ಕೋತೀಯಾ ನಾನಿಲ್ವ ನಿನ್ ಜೊತೇಲಿ" ಅಂತಾನಲ್ವಾ ಅದು ಪ್ರೀತಿ ...!!
ಯಾವಾಗ ಗೆಳೆಯರು "ನೀನು ನಮ್ ಜೊತೆ ಇರ್ಲಿಲ್ಲ ಅಂದ್ರೆ ಮಜಾನೆ ಇಲ್ಲ ಕಣೋ" ಅಂತಾರಲ್ವಾ ಅದು ಪ್ರೀತಿ ...!!
ಇದು ನಿಜವಾದ ಪ್ರೀತಿ ...
ಇಂತಹ ಪ್ರೀತಿಯನ್ನು ಕಳೆದುಕೊಳ್ಳಬೇಡಿ ...
ಪ್ರೀತಿ ಅನ್ನೋದು ಕೇವಲ ಪ್ರೇಮಿಗಳ ನಡುವೆ ಇರುವಂಥದ್ದಲ್ಲ...
ಯಾರು ನಿಮ್ಮ ಜೊತೆಯಲ್ಲಿ ಸದಾ ಇರ್ತಾರೋ ಅವರೆಲ್ಲರೂ ಕೂಡ ನಿಮ್ಮ ಪ್ರೀತಿಯಲ್ಲಿ ವಿಶೇಷವಾಗಿರೋರು
ಇದು ಪ್ರೀತಿ...
ಯಾವಾಗ ಚಿಕ್ಕ ಮಗಳು ತನ್ನೆಲ್ಲ ಶಕ್ತಿಯನ್ನು ಹಾಕಿ ತಂದೆಯ ತಲೆಗೆ ಮಸಾಜ್ ಮಾಡುತ್ತಾಳೋ...
ಯಾವಾಗ ಹೆಂಡತಿ ಗಂಡನಿಗೋಸ್ಕರ ಮಾಡಿದ ಕಾಫಿಯನ್ನು ಒಂದು ಸಿಪ್ ಕುಡಿದು ಕೊಡುತ್ತಾಳೋ...
ಯಾವಾಗ ತಾಯಿ ಕೇಕ್ ನ ವಿಶೇಷವಾದ ಭಾಗವನ್ನ ತನ್ನ ಮಗನಿಗೆ ಅಂತ ತೆಗೆದಿಡುತ್ತಾಳೋ...
ಯಾವಾಗ ಗೆಳೆಯನೊಬ್ಬ ತನ್ನ ಗೆಳೆಯ ಎಲ್ಲಿ ಜಾರಿ ಬೀಳುತ್ತಾನೋ ಅನ್ನೋ ಕಾಳಜಿಯಿಂದ ಕೈಯನ್ನು ಗಟ್ಟಿಯಾಗಿ ಹಿಡಿದು ಕೊಳ್ಳುತ್ತಾನೋ..
ಯಾವಾಗ ತಮ್ಮ ಮೆಸೇಜ್ ಮಾಡಿ “ಯಾವಾಗ ಮನೆಗೆ ಬರ್ತಾ ಇದೀಯಾ” ಅಂತಾ ಕೇಳ್ತಾನಲ್ವಾ?
ಇದು ಪ್ರೀತಿ ಅಂದ್ರೆ ...
ಪ್ರೀತಿಯಂದ್ರೆ ಕೇವಲ ಒಂದು ಹುಡುಗ ಅಥವಾ ಹುಡ್ಗಿನಾ ಕರ್ಕೊಂಡು ಪಾರ್ಕು, ಹೋಟೆಲ್, ಸಿನಿಮಾ ಅಂತಾ ತಿರುಗೊದಲ್ಲ ...!!
ಪ್ರೀತಿಯ ನಿಜವಾದ ಅರ್ಥ " ಕಾಳಜಿ " ಅಂತ...