Friday, September 28, 2018

ಅಪರೂಪವಾದರೂ ಬದುಕ ರುಚಿ ಹೆಚ್ಚಿಸುವ ಅವನಂತೆ!


ಕೇಸರಿಯ ಒಂದೆರಡು ಎಸಳು
ಸಿಹಿಗೆ ಅದೆಂಥ ಘಮ ತರುತ್ತದೆ!
ಹೆಚ್ಚು ಬಳಸಲಾಗದು, ಬೆಲೆ ಹೆಚ್ಚು
ಅಪರೂಪವಾದರೂ ಬದುಕ ರುಚಿ ಹೆಚ್ಚಿಸುವ ಅವನಂತೆ!

ಭಾರತಿ ಬಿ. ವಿ.

Sunday, September 23, 2018

ಒಳಗೆ ಕೊಳೆತರೆ ಹೊರಗೆ ತಿಳಿಯುವುದೇ ಇಲ್ಲ ...


ಉಪ್ಪಿನಕಾಯಿಯೇ ವಾಸಿ
ಕೆಟ್ಟಾಗ ಮೇಲೆ ಬೂಷ್ಟು ಬೆಳೆಯುತ್ತದೆ
ಮನುಷ್ಯರದ್ದೇ ಸಮಸ್ಯೆ!
ಒಳಗೆ ಕೊಳೆತರೆ ಹೊರಗೆ ತಿಳಿಯುವುದೇ ಇಲ್ಲ

ಭಾರತಿ ಬಿ. ವಿ.

Thursday, September 13, 2018

ಬೊಗಳೆ ಮನುಷ್ಯರ ಬಿಲ್ಡಪ್...


ಎಲೆ ಕೋಸು ಈರುಳ್ಳಿಯ ಒಳಗೇನಿದೆ
ಎಂಬ ಭ್ರಮೆ, ಕುತೂಹಲದಿಂದ
ಪದರಪದರಗಳನ್ನು ಬಿಡಿಸಿದ ನಂತರ
ಬೊಗಳೆ ಮನುಷ್ಯರ ಬಿಲ್ಡಪ್ ನೆನಪಾಗುತ್ತದೆ!

ಭಾರತಿ ಬಿ. ವಿ.

Tuesday, September 11, 2018

ನಮ್ಮಂತೆ ನೀನೇಕಿಲ್ಲ ...


ಚಹಾ ಪುಡಿಗೆ ನೀರು ಹಾಕಿ ಕುದಿಸಬಹುದು
ಕಾಫಿ ಪುಡಿ ಹಾಗೆ ಕುದಿಸಿದರೆ ರುಚಿಗೆಡುತ್ತದೆ
ನಮ್ಮಂತೆ ನೀನೇಕಿಲ್ಲ, ಯಾಕಷ್ಟು ಸೂಕ್ಷ್ಮ ಅನ್ನುವವರಿಗೆಲ್ಲ
ಇದೇ ನನ್ನ ಉತ್ತರ, ಅಷ್ಟೇ!

ಭಾರತಿ ಬಿ. ವಿ.

Friday, August 31, 2018


ಮಂಜೇಶ್ವರ ಗೋವಿಂದ ಪೈ

ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂಗೋವಿಂದ ಪೈಹಳಗನ್ನಡ ವಿದ್ವಾಂಸರೂ ಕವಿಗಳೂ ಆದ ಇವರು ಸಾಹುಕಾರ ತಿಮ್ಮಪ್ಪ ಮತ್ತು ದೇವಕಿಯಮ್ಮ ದಂಪತಿಗಳ ಪುತ್ರರಾಗಿ ೨೩--೧೮೮೩ರಲ್ಲಿ ಮಂಜೇಶ್ವರದಲ್ಲಿ ಜನಿಸಿದರು.

ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದ ಬಿ.ವ್ಯಾಸಂಗವನ್ನು ತಂದೆಯ ನಿಧನದ ದೆಸೆಯಿಂದ ನಿಲ್ಲಿಸಿದರುಸ್ವಂತ ವ್ಯಾಸಂಗದಲ್ಲೇ ಕನ್ನಡಇಂಗ್ಲಿಷ್ಗ್ರೀಕ್ಫ್ರೆಂಚ್ಸಂಸ್ಕೃತಜರ್ಮನ್ಪ್ರಾಕೃತ ಮೊದಲಾದ ದೇಶ  ವಿದೇಶಗಳ ಭಾಷೆಗಳನ್ನು ಕಲಿತರುಸಾಹಿತ್ಯ ರಚನೆ  ಸಂಶೋಧನೆಯಲ್ಲಿ ತೊಡಗಿದರುಎಲ್ಲೂ ಉದ್ಯೋಗಕ್ಕೆ  ಸೇರಲಿಲ್ಲ.

ಪೈಗಳ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಮದರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿತುಪೈಯವರನ್ನು ೧೯೪೯ರಲ್ಲಿ ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಸನ್ಮಾಸಿದರು.

ಅವರಿಗೆ ಸಾಹಿತ್ಯ ಪರಿಷತ್ತು ೧೯೫೧ರಲ್ಲಿ ಬೊಂಬಾಯಿಯಲ್ಲಿ ನಡೆದ ೩೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಪುರಸ್ಕರಿಸಿತು.

ಸಾಹಿತ್ಯ ಸೇವೆ:  ಗೊಮ್ಮಟ ಜಿನಸ್ತುತಿನಂದಾದೀಪಗಿಳಿವಿಂಡುಗೊಲ್ಗೊಥಾ ವೈಶಾಖಿಹೆಬ್ಬೆರಳುಶ್ರೀಕೃಷ್ಣ ಚರಿತ್ರೆಬರಹಗಾರನ ಹಣೆಬರಹಪಾರ್ಶ್ವನಾಥ ತೀರ್ಥಂಕರ ಚರಿತೆ ಇತ್ಯಾದಿ ಇವರ ಪ್ರಮುಖ ಕೃತಿಗಳು.

ಗೋವಿಂದ ಪೈ ಅವರು ಮಂಜೇಶ್ವರದಲ್ಲಿ --೧೯೬೩ರಲ್ಲಿ ನಿಧನರಾದರು.

ಬೇಸರದಿಂದ ಮಾತನಾಡಿಕೊಳ್ಳುತ್ತವೆ ...


ಈಗೀಗ ಯಾರೂ ನಮ್ಮೊಡನೆ ಕುಳಿತು
ಊಟ ಮಾಡುವುದೇ ಇಲ್ಲ
ಎಂದು ಬೇಸರದಿಂದ ಮಾತನಾಡಿಕೊಳ್ಳುತ್ತವೆ
ಊಟದ ಮೇಜು ಮತ್ತು ಕುರ್ಚಿಗಳು

ಭಾರತಿ ಬಿ. ವಿ.

Sunday, August 26, 2018

ಹೊಗೆ ಏಳುವುದು ಮಾತ್ರ ನಿಂತೇ ಇಲ್ಲ…


ಹಿಂದೆ ಸೌದೆ ಒಲೆಯ ಹೊಗೆ ಮನೆ ಆವರಿಸುತ್ತಿತ್ತು
ಈಗೆಲ್ಲ ಚಿಮಣಿಗಳು ಹೊಗೆ ಹೊರಗೆ ಹಾಕುತ್ತವೆ
ಒಟ್ಟಿನಲ್ಲಿ ಆಗಿನಿಂದ ಈಗಿನವರೆಗೆ
ಹೊಗೆ ಏಳುವುದು ಮಾತ್ರ ನಿಂತೇ ಇಲ್ಲ…

ಭಾರತಿ ಬಿ. ವಿ.

Wednesday, August 22, 2018

ಮೊದಲ ಪ್ರೇಮದ ಸವಿಯಂತೆ...


ಉಕ್ಕಿದ ನೊರೆಯ ಹಾಲು ಬೆರೆತ
ಮೊದಲ ಡೋಜ಼ಿನ ಕಾಫಿಯ ರುಚಿ
ಮುಂದಿನವುಗಳಲ್ಲಿ ಇರುವುದಿಲ್ಲ,
ಮೊದಲ ಪ್ರೇಮದ ಸವಿಯಂತೆ!

ಭಾರತಿ ಬಿ. ವಿ.

Sunday, August 19, 2018

ಸಿಕ್ಕಾಗ ಕೂಡಿಟ್ಟುಕೊಳ್ಳಬೇಕು...


ಮಾವಿನಕಾಯಿ ಕಾಲವಿರುವಾಗ
ತುಸು ಮೈಬಗ್ಗಿಸಿ ತುರಿದು ಫ್ರೀಜರ್ ನಲ್ಲಿಟ್ಟರೆ
ಬೇಕು ಬೇಕೆಂದಾಗ ಚಿತ್ರಾನ್ನ, ಗೊಜ್ಜು…
ಪ್ರೀತಿಯೂ ಅಷ್ಟೇ, ಸಿಕ್ಕಾಗ ಕೂಡಿಟ್ಟುಕೊಳ್ಳಬೇಕು

ಭಾರತಿ ಬಿ. ವಿ.

Saturday, August 18, 2018


ಡಾ|| ಜಿ.ಎಸ್. ಶಿವರುದ್ರಪ್ಪ

ಕನ್ನಡದ ರಾಷ್ಟ್ರಕವಿಗಳಲ್ಲಿ ಒಬ್ಬರಾಗಿ ವಿಮರ್ಶಕರು ಕವಿಗಳೆಂದು ಪ್ರಸಿದ್ಧರಾದ ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ --೧೯೨೬ರಲ್ಲಿ ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ (ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಸರಕಾರಿ ನೌಕರಿ ಹಿಡಿದು ದುಡಿಯಲಾರಂಭಿಸಿದರು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ೧೯೪೯ರಲ್ಲಿ ಬಿ.. ಪದವಿಯನ್ನು, ೧೯೫೩ರಲ್ಲಿ ಸ್ವರ್ಣಪದಕದೊಂದಿಗೆ ಎಂ.. ಪದವಿಯನ್ನು ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ೧೯೪೯ರಿಂದ ೧೯೬೩ವರೆಗೆ ಸೇವೆ ಸಲ್ಲಿಸಿದ ಇವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೩ರಿಂದ ೬೬ವರೆಗೆ ದುಡಿದರು. ೧೯೬೬ರಿಂದ ೧೯೮೬ವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಇವರ ಸಾಹಿತ್ಯ ಸೇವೆಗೆ ಹತ್ತಾರು ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೭೪), ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ (೧೯೮೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೪), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೮೪), ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ (೧೯೮೬), ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ೬೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ (೧೯೮೭), ಪಂಪ ಪ್ರಶಸ್ತಿ (೧೯೯೮), ೨೦೦೦ರಲ್ಲಿ ರಾಷ್ಟ್ರಕವಿ ಗೌರವ ಕುವೆಂಪು ವಿಶ್ವವಿದ್ಯಾಲಯ(೨೦೦೬) ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ (೨೦೦೩) ದೊರೆಯಿತು.

ಜಿ.ಎಸ್. ಶಿವರುದ್ರಪ್ಪನವರ ಮುಖ್ಯವಾದ ಕೃತಿಗಳು:

ಬಹುಮುಖ ಪ್ರತಿಭೆಯ ಸಮನ್ವಯ ಕವಿ ಎನಿಸಿದ ಜಿ.ಎಸ್.ಎಸ್ ಅವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಆಗಿರುವಂತೆಯೇ ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ಬರೆದ ಕೆಲವು ಕೃತಿಗಳನ್ನು ಇಲ್ಲಿ ಉಲ್ಲೇಖಿಸಿದೆ :

ಸಂಪಾದನೆ : ೧೯೭೧ರಿಂದ ಹೊರಬಂದ ಸಾಹಿತ್ಯ ವಾರ್ಷಿಕಗಳು, ಶಬರವಿಳಾಸ ಸಂಗ್ರಹ (ಬಿ.ಎನ್. ಶಾಸ್ತ್ರಿ ಜತೆ), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ೧೦ ಸಂಪುಟಗಳು, ಕೆ.ಎಸ್. ಸಂಭಾವನಾ ಗ್ರಂಥ ಚಂದನ.

ವಿಮರ್ಶಾ ಕೃತಿಗಳು : ವಿಮರ್ಶೆಯ ಪೂರ್ವಪಶ್ಚಿಮ (೧೯೬೧), ಸೌಂದರ್ಯ ತಿಬಿಂಬ (೧೯೬೯), ಕನ್ನಡ ಕವಿಗಳ ಕಾವ್ಯ ಕಲ್ಪನೆ (೧೯೮೯) ಇತ್ಯಾದಿ.

ಪ್ರವಾಸ ಗ್ರಂಥಗಳು :ಮಾಸ್ಕೊದಲ್ಲಿ ೨೨ ದಿನ (೧೯೭೩), ಗಂಗೆಯ ಶಿಖರಗಳಲ್ಲಿ, ಅಮೇರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ.

ಕವನ ಸಂಗ್ರಹಗಳು : ಸಾಮಗಾನ (೧೯೫೧), ಚೆಲುವು-ಒಲವು (೧೯೫೩), ದೇವಶಿಲ್ಪ (೧೯೫೬), ದೀಪದ ಹೆಜ್ಜೆ (೧೯೫೯), ಕಾರ್ತೀಕ (೧೯೬೧), ತೀರ್ಥವಾಣಿ (೧೯೬0), ಅನಾವರಣ (೧೯೬೩), ನನ್ನ ನಿನ್ನ ನಡುವೆ (೧೯೭೩), ವ್ಯಕ್ತ-ಮಧ್ಯ (೧೯೯೯) ಇತ್ಯಾದಿ.

ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ ೨೩-೧೨-೨೦೧೩ರಲ್ಲಿ ದೈವಾಧೀನರಾದರು.


ಕುವೆಂಪು (ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪ)

ಕನ್ನಡದ ಮಹಾಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪ) ವೆಂಕಟಪ್ಪಗೌಡ ಮತ್ತು ಸೀತಮ್ಮ ದಂಪತಿಗಳಿಗೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ೨೯-೧೨-೧೯೦೪ರಲ್ಲಿ ಜನಿಸಿದರು. ೧೯೧೬ರಲ್ಲಿ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ೧೯೨೯ರಲ್ಲಿ ಎಂ.. ಪದವಿ ಗಳಿಸಿದರು.

೧೯೨೯ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ೧೯೬೦ರಲ್ಲಿ ನಿವೃತ್ತರಾದರು.

ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು.  ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು. ಮೈಸೂರಿನಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ ೧೯೫೭ರಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿಯನ್ನೂ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು.

ಬೆಂಗಳೂರು ವಿಶ್ವವಿದ್ಯಾನಿಲದಿಂದ ೧೯೬೯ರಲ್ಲಿ ಗೌರವ ಡಿ.ಲಿಟ್. ಲಭಿಸಿತು. ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿಗಳು ಕುವೆಂಪು ಅವರ ದೈತ್ಯಸಾಹಿತ್ಯ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳಾಗಿವೆ.

೧೯೬೮ರಲ್ಲಿ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಆಗಿದೆ. ೧೯೯೫ರಲ್ಲಿ ನಾಡೋಜ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರ ನೀಡಲಾಯಿತು. ೧೯೮೫ರಲ್ಲಿ ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.

ಅಪಾರ ಅನುಪಮ ಸಾಹಿತ್ಯ ರಚನೆ ಮಾಡಿದ್ದ ಕುವೆಂಪು ಅವರು, ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು. ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು. ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು. ಮಾಸ್ತಿ ಜತೆ  ಕರ್ಣಾಟಕ ಭಾರತ ಕಥಾಮಂಜರಿಯನ್ನು ಸಂಪಾದಿಸಿದ್ದಾರೆ.

ಅವರ ಕೆಲವು ಪ್ರಸಿದ್ಧ ಕೃತಿಗಳು ಇವು:

ಶ್ರೀರಾಮಯಣ ದರ್ಶನಂ, ಕಬ್ಬಿಗನ ಕೈಬುಟ್ಟಿ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ವಿಚಾರ ಕ್ರಾಂತಿಗೆ ಆಹ್ವಾನ, ಬೆರಳ್ಗೆ ಕೊರಳ್, ಶೂದ್ರತಪಸ್ವಿ, ಸ್ವಾಮಿ ವಿವೇಕಾನಂದ, ಚಿತ್ರಾಂಗದಾ, ಪಾಂಚಜನ್ಯ, ಬೊಮ್ಮನಹಳ್ಳ್ಳಿ ಕಿಂದರಿಜೋಗಿ, ಕೊಳಲು ಇತ್ಯಾದಿ.

ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದ ಕುವೆಂಪು ಅವರು ೧೧-೧೧-೧೯೯೪ರಲ್ಲಿ ಮೈಸೂರಿನಲ್ಲಿ ನಿಧನರಾದರು.