Sunday, November 30, 2014

ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ ಬೆಳೆಸುತ್ತ ಸೈಪ

ಡಾ|| ಸಿದ್ದಯ್ಯ ಪುರಾಣಿಕ
ಈ ನಾಡಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Saturday, November 29, 2014

ಸತ್ತ ಶವದ ಮುಂದೆ ಕುಳಿತುಕೊಳ್ಳಬಹುದು, ಆದರೆ ...

ಸತ್ತ ಶವದ ಮುಂದೆ ಕುಳಿತುಕೊಳ್ಳಬಹುದು
ಆದರೆ, ಕೊಳೆತ ಮನಸ್ಸುಗಳ ಮುಂದೆ
ಕುಳಿತುಕೊಳ್ಳಲು ಸಾಧ್ಯವಿಲ್ಲ.

Saturday, November 1, 2014


ಸ್ವಾತಂತ್ರ್ಯ ಪೂರ್ವದಲ್ಲಿ ನೆರೆಹೊರೆಯ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡದ ಪ್ರದೇಶಗಳು ೧೯೫೬ರ ನವಂಬರ್ ೧ ರಂದು ಏಕೀಕರಣಗೊಂಡು, ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಕನ್ನಡಿಗರ ಸಮಗ್ರತೆಯನ್ನು ಸಂಕೇತಿಸುವಂತೆ ೧೯೭೩ರ ನವಂಬರ್ ೧ ರಂದು ವಿಶಾಲ ಮೈಸೂರು ರಾಜ್ಯವು "ಕರ್ನಾಟಕ" ಎಂದು ಮರುನಾಮಕರಣಗೊಂಡಿತು. ಪ್ರತಿ ವರ್ಷ ನವಂಬರ್ ೧ ರಾಜ್ಯೋತ್ಸವ ದಿನ, ಕನ್ನಡಿಗರೆಲ್ಲರಿಗೂ ಒಂದಾಗಿ ನಲಿವ ಸುದಿನ. ಒಟ್ಟಾಗಿ ಬೆಳೆದು ಬೆಳೆಯಲು ಸ್ಪೂರ್ತಿಯ ಕ್ಷಣ.

"ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ, ಶಕ್ತಿ ಕಣಾ
ತಾಯಿ ಕಣಾ, ದೇವಿ ಕಣಾ
ಬೆಂಕಿ ಕಣಾ, ಸಿಡಿಲು ಕಣಾ"

- ರಾಷ್ಟ್ರಕವಿ ಕುವೆಂಪು