ಹೇ…
ಹೂವೇ…
ಸಾಗರದ
ಅಲೆಗಳು ಜೋರಾಗಿ
ದಡವ ಅಪ್ಪಳಿಸಲು
ಮತ್ತದೇ
ನೆನಪು
ಸದಾ ಕಾಡುವುದು
ಮರಳ ರಾಶಿಯ
ಮೇಲೆ
ನೀ ಬರೆದ
ನನ್ನ ಹೆಸರು
ಆ ಒಂದು
ನಿಮಿಷ ಭೋರ್ಗರೆಯುವ
ಅಲೆ ಬಾರದಿದ್ದರೆ
ಉಳಿಯುತಿತ್ತು
ನೀ ಮರಳ
ರಾಶಿಯ ಮೇಲೆ ಬರೆದ
ನನ್ನ ಹೆಸರು,
ಬಹುಷಃ ಅಲೆಗೂ ಸಹ
ನನ್ನ ಮೇಲೆ
ನಂಬಿಕೆ ಇರಲಿಲ್ಲ ಎಂಬ
ಭಾವ ಸದಾ
ಕಾಡುವುದು, ಹೂವೇ…